ಶ್ರೌತ ಸೂತ್ರಗಳು
ಶ್ರೌತ ಸೂತ್ರಗಳು ಬಹಳವಾಗಿ ಯಜ್ಞಮಾಡುವ ವಿಧಾನವನ್ನು ವಿವರಿಸುವುದು. ಇದರ ಬಗ್ಗೆ ಸಂಕ್ಷೇಪವಾಗಿ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ.
ಯಜ್ಞಮಾಡುವ ಮುಖ್ಯ ಕರ್ತನಿಗೆ ಯಜಮಾನ ಎನ್ನುವರು.
ಯಜ್ಞದಲ್ಲಿ ಮಂತ್ರಗಳನ್ನು ಪಠಿಸುತ್ತಾ ಯಜ್ಞಾಂಗಕರ್ಮಗಳನ್ನು ನೆರವೇರಿಸಲು ಯಜಮಾನನಿಗೆ ಸಹಾಯ ಮಾಡುವ ಪುರೋಹಿತರಿಗೆ ಋತ್ವಿಕ್ಕುಗಳೆನ್ನುವರು. ಯಜ್ಞದಲ್ಲಿ ನಾಲ್ಕು ಪ್ರಮುಖ ಋತ್ವಿಜರಿರುವರು. ಅವರೆಂದರೆ - ಹೊತೃ, ಅಧ್ವರ್ಯು, ಉದ್ಗಾತೃ ಹಾಗೂ ಬ್ರಹ್ಮ. ಇವರುಗಳಲ್ಲದೆ 16 ಋತ್ವಿಜರಿರುವರು.
ಯಜ್ಞದಲ್ಲಿ ಮೂರು ಮುಖ್ಯವಾದ ಅಗ್ನಿಗಳು ಇರುವುದು. ಅವುಗಳೆಂದರೆ - ದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನೀಯ. ಇದು ಎಲ್ಲರಿಗೂ ಚಿರಪರಿಚಿತ.
ಮುಂದುವರೆದು ಯಜ್ಞಕರ್ಮಗಳ ಬಗ್ಗೆ ಸಂಕ್ಷಿಪ್ತವಾಗಿ ಅರಿಯೋಣ:
ಮೊದಲಿನ ಯಜ್ಞಕರ್ಮವೇ ಅಗ್ನ್ಯಾಧೇಯ:
ಅಂದರೆ ಅಗ್ನಿಯನ್ನು ಅರಣಿಯಲ್ಲಿ ಕಡೆಯುವುದು. ಹಾಗೆಂದರೇನು? ಅರಣಿಯನ್ನು ಹೇಗೆ ಕಡೆಯುವುದು? ಇದಕ್ಕೆ ಉತ್ತರವೆಂದರೆ ಅರಣಿಯು ಯಜ್ಞದಲ್ಲಿ ಉಪಯೋಗಿಸುವ ಮರದ ತುಂಡು. ಇದರ ಮೇಲೆ ಬೇರೆ ಮರದ ತುಂಡಗಳನ್ನಿಟ್ಟು ಕಡೆದು ಬೆಂಕಿಯನ್ನು ಉತ್ಪತ್ತಿಮಾಡುವರು. ಮಾಮೂಲಿನಂತೆ ಬೆಂಕಿ ಕಡ್ಡಿಯಿಂದ ಬೆಂಕಿಯನ್ನು ಮಾಡುವುದಿಲ್ಲ.
ಇನ್ನು ಮುಖ್ಯವಾದ ಯಜ್ಞಗಳ ಬಗ್ಗೆ ಸ್ವಲ್ಪ ನೋಡೋಣ :
ಮುಖ್ಯವಾದ ಯಜ್ಞಗಳೆಂದರೆ - ಅಗ್ನಿಹೋತ್ರ, ದರ್ಶಪೂರ್ಣಮಾಸ, ಸೋಮ, ಚಾತುರ್ಮಾಸ್ಯ, ಅಗ್ನಿಷ್ಟೋಮ.
ಇವುಗಳಲ್ಲಿ ಕೆಲವು ಯಜ್ಞಗಳ ಬಗ್ಗೆ ಕುತೂಹಲವಾದ ವಿಷಯಗಳನ್ನು ತಿಳಿಯೋಣವೇ!
ದರ್ಶಪೂರ್ಣಮಾಸ ಎಂದರೆ ಅಮಾವಾಸ್ಯೆ ಮತ್ತು ಹುಣ್ಣಿಮೆಗಳ ನಡುವೆ ನಡೆಸಲ್ಪಡಬೇಕಾದ ಯಜ್ಞವಿಶೇಷ.
ಚಾತುರ್ಮಾಸ್ಯ ಎಂದರೆ ಒಂದು ಸಂವತ್ಸರದಲ್ಲಿ ಬೇಸಿಗೆ, ಮಳೆ ಮತ್ತು ಛಳಿಗಾಲಗಳು ಮೂರು ಮುಖ್ಯವಾದ ಕಾಲಗಳು.
ಈ ಕಾಲಗಳ ಪ್ರಾರಂಭದಲ್ಲಿ ಮಾಡುವ ಪ್ರಮುಖ ಯಜ್ಞ.
ಸೋಮಯಾಗದಲ್ಲಿ ಯಜಮಾನ ಹಾಗೂ ಅವನ ಪತ್ನಿಗೆ ಸಂಬಂಧಿಸಿದ ದೀಕ್ಷಾವಿಧಿ ಹಾಗೂ ಇತರೆ ಯಜ್ಞಕರ್ಮಗಳಿಗೆ ವಿಶೇಷ ನಿಯಮಗಳಿವೆ. ಈ ಯಾಗವು 12ದಿನ ನಡೆಯುವುದು. ಇದರಲ್ಲಿನ ಸತ್ರ ಎಂಬ ಯಾಗವು ಒಂದು ವರ್ಷಕಾಲ ನಡೆಯುವುದು. ಈ ಯಾಗಕ್ಕೆ ಸಂಬಂಧಿಸಿದಂತೆ ಅಗ್ನಿಚಯನ ಎಂಬ ಕ್ರಿಯೆಯು ಇರುವುದು. ಅಗ್ನಿಕುಂಡ ವೇದಿಕೆಯನ್ನು ರಚಿಸಲು ಅಗ್ನಿಚಯನವು ಅವಶ್ಯಕವಾದದ್ದು. ಇದರಲ್ಲಿ ಇಟ್ಟಿಗೆಗಳ ಪ್ರಮಾಣ, ಅವುಗಳಲ್ಲಿ ಸೇರಿರುವ ವಸ್ತುಗಳು, ಅವುಗಳನ್ನು ನಿರ್ಮಿಸುವ ಕ್ರಮ ಇತ್ಯಾದಿ ವಿಷಯಗಳನ್ನು ವಿಸ್ತಾರವಾಗಿ ವಿವರಿಸಿರುವರು. ಹಾಗೆ ಯಾವ ಪ್ರಮಾಣದ ಇಟ್ಟಿಗೆಗಳನ್ನು ಯಾವ ರೀತಿ ಇಡಬೇಕು, ಯಾವ ಕಾಲದಲ್ಲಿ ಯಾವ ಮಂತ್ರಗಳನ್ನು ಹೇಳಬೇಕು ಮತ್ತು ಯಾವ ಕರ್ಮಗಳನ್ನು ಆಗಾಗ ಮಾಡಬೇಕು - ಇವೆಲ್ಲವುಗಳ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ.
ಅಗ್ನಿಚಯನದಲ್ಲಿ 10800 ಇಟ್ಟಿಗೆಗಳನ್ನು ಉಪಯೋಗಿಸುವರು. ಈ ಕಾರ್ಯವನ್ನು ನಡೆಸಿಕೊಡಲು 16 ಋತ್ವಿಕ್ಕುಗಳು ಬೇಕು.
…..ಮುಂದಿನ ಲೇಖನದಲ್ಲಿ ನಾಲ್ಕು ವೇದಗಳಿಗೆ ಸಂಬಂಧಿಸಿದ ಶ್ರೌತಸೂತ್ರಗಳನ್ನು ತಿಳಿದುಕೊಳ್ಳೋಣ.

No comments:
Post a Comment