ಋಗ್ವೇದದ ಋಷಿಗಳು
ಋಷಿ ಎಂದರೆ ಜ್ಞಾನಿ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಅರ್ಥ. ಹಾಗಾಗಿ ಜ್ಞಾನಿಗಳನ್ನೆಲ್ಲಾ ಋಷಿ ಎನ್ನಬಹುದು. ಮುಂದುವರೆದು ಋಷಿ ಎಂಬ ಶಬ್ದಕ್ಕೆ ವೇದ ಮಂತ್ರಗಳನ್ನು ದರ್ಶನ ಮಾಡಿದವನು ಎಂಬ ಅರ್ಥವೂ ಉಂಟು.
ಈಗ ವೇದ ಮಂತ್ರ ದರ್ಶನದ ಬಗ್ಗೆ ಕೆಲವು ವಿಚಾರಗಳು:-
ಅಧ್ಯಯನ ಮಾಡದೆ ಪರಮೇಶ್ವರಾನುಗ್ರಹದಿಂದ ಮಂತ್ರಗಳು ಯಾರಿಗೆ ಗೋಚರಿಸುವುದೋ ಅವರು ಆ ಮಂತ್ರಗಳಿಗೆ ಋಷಿ;
ಯಾರಿಗೆ ಮಂತ್ರವು ಗೋಚರಿಸಿದೆ ಎನ್ನುತೇವೆಯೋ ಅವರಿಗೇ ಮೊದಲು ಗೋಚರಿಸಿತು ಎನ್ನಲಾಗುವುದಿಲ್ಲ;
ಅಧ್ಯಯನ ಮಾಡಿ ಮಂತ್ರಗಳನ್ನು ಸ್ವಾಧೀನ ಮಾಡಿಕೊಂಡವರೂ ಅಥವಾ ದರ್ಶನ ಮಾಡಿದವರೂ ಋಷಿಗಳಾಗಬಹುದು. ಆದರೆ ಈ ದರ್ಶನವು ಅವರಿಗೆ 12ಕ್ಕಿಂತ ಕಡಿಮೆ ಬಾರಿ ಅಧ್ಯಯನ ಮಾಡಿದಾಗ ಮಾತ್ರ ಆಗಿರಬೇಕು. ಅಂದರೆ ಋಷಿತ್ವವು ಮಂತ್ರಗಳು ಮೊದಲಿಗೆ ಗೋಚರಿಸಿದವರಿಗೆ ಮಾತ್ರ ಮೀಸಲಾಗಿರುವುದಿಲ್ಲ. ಇತರರಿಗೂ ಅನ್ವಯಿಸಬಹುದು;
ಋಷಿಗಳಲ್ಲಿ ಮೂರು ಗುಂಪುಗಳಿವೆ -
ಶತರ್ಚಿನರು - ನೂರು ಮಂತ್ರಗಳನ್ನು ಗೋಚರಿಸಿಕೊಂಡವರು;
ಮಧ್ಯಮರು - ಋಗ್ವೇದದಲ್ಲಿನ 2 ರಿಂದ 7ನೇ ಮಂಡಲದ ಋಷಿಗಳಾದ ಗೃತ್ಸಮದ, ವಿಶ್ವಾಮಿತ್ರ, ವಾಮದೇವ, ಗೌತಮ, ಅತ್ರಿ, ಭಾರದ್ವಾಜ, ವಸಿಷ್ಠ, ಪಾವಮಾನ್ಯ ಋಷಿಗಳು ಮಧ್ಯಮರು;
ಕ್ಷುದ್ರ ಸೂಕ್ತ ಮತ್ತು ಮಹಾಸೂಕ್ತ - ಋಗ್ವೇದದ 10ನೇ ಮಂಡಲದ ಋಷಿಗಳು.
ಋಷಿ ಭೇದಗಳು - ಋಷಿಗಳಲ್ಲಿ 4 ಭೇದಗಳುಂಟು -

ಮಹರ್ಷಿ (ಈಶ್ವರ) - ಇವರನ್ನು ಋಷಿಗಳಲ್ಲೆಲ್ಲ ಅತ್ಯುತ್ತಮರೆಂದು ಹಾಗೂ ಪ್ರಥಮ ದರ್ಜೆಯವರು ಪರಿಗಣಿಸುವರು - ಭೃಗು, ಮರೀಚಿ, ಅತ್ರಿ, ಅಂಗೀರಸ್, ಪುಲಹ, ಕ್ರತು, ಮನು, ದಕ್ಷ, ವಸಿಷ್ಠ ಮತ್ತು ಪುಲಸ್ತ್ಯ ಎಂಬ ಮಹರ್ಷಿಗಳು ಬ್ರಹನ ಮಾನಸಪುತ್ರರು. ಇವರನ್ನು ಈಶ್ವರರೆಂದೂ ಕರೆಯುವರು.
ಋಷಿಗಳು - ಉಶನಾಕಾವ್ಯ, ಬೃಹಸ್ಪತಿ, ಕಶ್ಯಪ ಹಾಗೂ ಇತರೆ ಹತ್ತು ಮಂದಿಯು ಎರಡನೇ ವರ್ಗದ ಋಷಿಗಳು. ಇವರೆಲ್ಲರೂ ಭೃಗುಮಹರ್ಷಿಗಳ ಪುತ್ರರು. ಇವರು ತಪಸ್ಸಿನ ಮೂಲಕ ಋಷಿಪದವಿಯನ್ನೇರಿದರು.
ಋಷಿಪುತ್ರ - ಋಷೀಕವರ್ಗವನ್ನು ಒಂದೇ ಗುಂಪಿನಲ್ಲಿ ಸೇರಿಸಲಾಗಿದೆ. ಈ ವರ್ಗದವರು ಋಷಿಗಳ ಔರಸಪುತ್ರರು. ಈ ವರ್ಗದ ಕೆಲವರೆಂದರೆ - ವತ್ಸರ, ಭಾರದ್ವಾಜ, ಶರದ್ವತ, ವಾಜಾಶ್ರವಸ್ ಇತ್ಯಾದಿ.
ಭೃಗುಕುಲದಲ್ಲಿ 19 ಋಷಿಗಳಿದ್ದರು. ಹಿಂದೆ ಅಥರ್ವವೇದಕ್ಕೆ ಇರುವ ಅನೇಕ ಹೆಸರುಗಳಲ್ಲಿ ಭೃಗ್ವಂಗಿರೋವೇದವೆಂದೂ ಗುರುತಿಸುತ್ತಿದ್ದರು. ಅಂದರೆ ಈ ವೇದಗಳ ಹೆಚ್ಚು ಭಾಗ ಮಂತ್ರಗಳನ್ನು ಭೃಗು ಮತ್ತು ಅಂಗೀರಸ ಕುಲದ ಋಷಿಗಳೇ ಬಹಳವಾಗಿ ದರ್ಶನಮಾಡಿದವರು ಎಂಬ ಅಭಿಪ್ರಾಯ.
ಇತರ ಕುಲದ ಋಷಿಗಳ ಪೈಕಿ ಋಷಿ ಪದವಿಗೇರಿದ ಪ್ರಮುಖರಾದವರೆಂದರೆ -
ಅಂಗಿರಾಕುಲ - 33 ಋಷಿಗಳು
ಕಾಶ್ಯಪರು - 6 ಋಷಿಗಳು
ಆತ್ರೇಯರು - 6 ಋಷಿಗಳು
ವಾಸಿಷ್ಠರು - 8 ಋಷಿಗಳು
ಕೌಶಿಕರು (ವಿಶ್ವಾಮಿತ್ರ) - 13
ಅಗಸ್ತ್ಯರು - 3 ಋಷಿಗಳು
ಕ್ಷತ್ರಿಯರು - 2 ಋಷಿಗಳು
ವೈಶ್ಯರು - 3
ಈ ಋಷಿಗಳೆಲ್ಲಾ ವೇದ ಮಂತ್ರಗಳನ್ನು ಮೊದಲಿಗೆ ದರ್ಶನ ಮಾಡಿದವರಲ್ಲ. ಒಂದು ಉದಾಹರಣೆಯೆಂದರೆ - ಮನುವಿಗೆ ಅನೇಕ ಮಕ್ಕಳಿದ್ದರು. ಅವನ ಕೊನೆಯ ಪುತ್ರ ನಾಭಾನೇದಿಷ್ಠ. ಇವನು ತನ್ನ ಗುರುಕುಲಾಭ್ಯಾಸ ಮುಗಿದರೂ ಗುರುಕುಲದಿಂದ ಬಹಳ ದಿನವಾದರೂ ಹಿಂದಿರುಗಿ ಬರಲಿಲ್ಲ. ಹಾಗಾಗಿ ಮನುವಿನ ಅಪ್ಪಣೆಯ ಮೇರೆಗೆ ಆಸ್ತಿಯನ್ನು ಉಳಿದ ಮಕ್ಕಳು ಹಂಚಿಕೊಂಡರು. ನಂತರ ಮರಳಿ ಬಂದ ನಾಭಾನೇದಿಷ್ಠನು ತನ್ನ ಭಾಗದ ಆಸ್ತಿಯನ್ನು ಕೊಡಬೇಕೆಂದು ತಂದೆಯಲ್ಲಿ ಕೇಳಿದನು. ಆಗ ಮನುವು ಅವನಿಗೆ ಎರಡು ಸೂಕ್ತಗಳನ್ನೂ ಹಾಗೂ ಒಂದು ಬ್ರಾಹ್ಮಣವನ್ನೂ ಉಪದೇಶಿಸಿ - "ಅಂಗೀರಸ ಋಷಿಗಳು ಸ್ವರ್ಗವನ್ನು ಪಡೆಯುವ ಉದ್ದೇಶದಿಂದ ಯಜ್ಞವನ್ನು ಮಾಡುತ್ತಿದ್ದಾರೆ. ಆ ಯಜ್ಞದ ಕೆಲವು ಕರ್ಮಗಳು ಸರಿಯಾಗಿ ನಡೆಯುತ್ತಿಲ್ಲ. ನೀನು ಹೋಗಿ ಈ ಮಂತ್ರಗಳನ್ನು ಪಠಿಸಿ, ಆ ಕರ್ಮಗಳನ್ನು ಸರಿಪಡಿಸು. ಆಗ ಅವರು ನಿನಗೆ ದಕ್ಷಿಣೆಯನ್ನು ಕೊಡುತ್ತಾರೆ. ಅದೇ ನಿನ್ನ ಭಾಗದ ಆಸ್ತಿ" ಎಂದು ಹೇಳಿದನು. ಹೀಗೆ ಮನುವಿನಿಂದ ನಾಭಾನೇದಿಷ್ಠನಿಗೆ ಉಪದೇಶವಾದ ಸೂಕ್ತಗಳೆಂದರೆ ಋಗ್ವೇದದ 10ನೇ ಮಂಡಲದಲ್ಲಿನ 61 ಮತ್ತು 62ನೇ ಸುಪ್ರಸಿದ್ಧವಾದ ಸೂಕ್ತಗಳು. ಮನುವು ಉಪದೇಶಿಸಿ ಬ್ರಾಹ್ಮಣವು ತೈತ್ತಿರೀಯಸಂಹಿತೆಯಲ್ಲಿದೆ. ಇದರ ಬಗ್ಗೆ ಭಟ್ಟಭಾಸ್ಕರರು ತೈತ್ತಿರೀಯಸಂಹಿತಾ ಭಾಷ್ಯದಲ್ಲಿ ಉಲ್ಲೇಖಿಸಿರುವರು. ಇವೆಲ್ಲದರ ಅಭಿಪ್ರಾಯವೇನೆಂದರೆ ಮೇಲೆ ತಿಳಿಸಿರುವ ಮಂತ್ರಗಳು ಹಾಗೂ ಬ್ರಾಹ್ಮಣವು ನಾಭಾನೇದಿಷ್ಠನಿಗಿಂತ ಮುಂಚೆ ಇದ್ದರೂ ನಾಭಾನೇದಿಷ್ಠನು ಇವುಗಳಿಂದ ವಿಶೇಷ ಪ್ರಯೋಜನ ಪಡೆದಿದ್ದರಿಂದ ಈತನೇ ಈ ಮಂತ್ರ ಹಾಗೂ ಬ್ರಾಹ್ಮಣಕ್ಕೆ ಋಷಿಯೆಂದು ಪರಿಗಣಿಸಲಾಗಿದೆ. ಹೀಗೆ ಪ್ರಥಮ ಬಾರಿಗೇ ಮಂತ್ರಗಳ ದರ್ಶನವಾಗದೇ ಇದ್ದರೂ ನಂತರ ಉಪದೇಶಿಸಲ್ಪಟ್ಟ ಋಷಿಗಳ ಬಗ್ಗೆ ಹಲವಾರು ಕಡೆಗಳಲ್ಲಿ ಉಲ್ಲೇಖವಿರುವುದು. ಈ ಋಷಿಗಳನ್ನು ಮಂತ್ರದ್ರಷ್ಟಾರರು ಎನ್ನುವುದಕ್ಕಿಂತ ಮಂತ್ರಾರ್ಥಗಳನ್ನು ಪ್ರಕಾಶಪಡಿಸಿದವರು ಅಥವಾ ಮಂತ್ರಗಳನ್ನು ಪ್ರಥಮ ಬಾರಿಗೆ ಯಜ್ಞ ಯಾಗಾದಿಗಳಲ್ಲಿ ಪ್ರಯೋಗಿಸಿದವರು ಎನ್ನಬಹುದು.
ಮಂತ್ರಗಳ ಅರ್ಥದ್ರಷ್ಟೃಗಳಾದ ಋಷಿಗಳು
ವೇದಗಳಲ್ಲಿ ಮಂತ್ರಗಳು ಪದೇ ಪದೇ ಪ್ರಾದುರ್ಭವಿಸಿವೆ. ಒಂದೇ ಮಂತ್ರವು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಋಷಿಗಳಿಂದ ದೃಷ್ಟವಾಗಿವೆ. ಇಷ್ಟೇ ಅಲ್ಲದೆ ಒಂದೇ ಮಂತ್ರವನ್ನು ಸಂದರ್ಭಕ್ಕನುಸಾರವಾಗಿ ಬೇರೆ ಬೇರೆ ಪ್ರಯೋಗವನ್ನು ಮಾಡಿರುವುದನ್ನೂ ಕಾಣಬಹುದು. ಅಂದರೆ ಒಂದೇ ಮಂತ್ರಕ್ಕೆ ಬೇರೆ ಬೇರೆ ಅರ್ಥವನ್ನು ಮಾಡಿರುತ್ತಾರೆ. ಹೀಗಾಗಿ ಋಷಿಗಳು ಅರ್ಥದರ್ಶನವನ್ನೂ ಪಡೆದರು ಎನ್ನಬಹುದು. ಮಂತ್ರದರ್ಶನಕ್ಕೂ ಮಂತ್ರಾರ್ಥದರ್ಶನಕ್ಕೂ ವ್ಯತ್ಯಾಸವಿದೆ.
ಕೆಲವು ಕಡೆಗಳಲ್ಲಿ ಮಂತ್ರಗಳ ಋಷಿಗಳು ತಮ್ಮ ಮೂಲ ನಾಮಧೇಯವನ್ನು ಬಿಟ್ಟು ವೇದದಲ್ಲಿ ಬರುವ ಪದಗಳನ್ನೇ ತಮ್ಮ ಹೆಸರನ್ನಾಗಿ ಸ್ವೀಕರಿಸಿರುವರು.
ಆರ್ಯಧರ್ಮ, ಅಥವಾ ಹಿಂದೂ ಧರ್ಮಕ್ಕೆ ಋಷಿಗಳೇ ಮೂಲಪುರುಷರು. ನಮ್ಮ ಸಂಸ್ಕೃತಿಯ ನಿರ್ಮಾತೃಗಳೇ ಇವರು. ಪ್ರತಿಯೊಬ್ಬ ಋಷಿಯೂ ಧರ್ಮಾಧರ್ಮದ ಸಾರವನ್ನು ತಿಳಿದು ಅದರಂತೆ ಸ್ವತಃ ಧರ್ಮಮಾರ್ಗವನ್ನೇ ಅವಲಂಬಿಸಿದವರು, ಯಥಾರ್ಥವಾದಿಗಳು, ಸತ್ಯವ್ರತರು.
ಋಷಿಗಳು ಸಮಸ್ತವನ್ನೂ ತ್ಯಾಗಮಾಡಿದವರು. ಅವರನ್ನು ನೋಡಿದರೆ ದಟ್ಟದರಿದ್ರರಂತೆ ಇರುತ್ತಾರೆ. ಇಂಥವರೆಲ್ಲಿ? ರಾಜಾಧಿರಾಜರುಗಳೆಲ್ಲಿ? ಆದರೂ, ಧರ್ಮರಕ್ಷಕರೂ, ಪ್ರಚಾರಕರೂ, ಜ್ಞಾನನಿಧಿಗಳೂ ಆದ ಇವರಿಗೆ ಎಲ್ಲೆಲ್ಲಿಯೂ ಗೌರವವಿದ್ದೇ ಇದೆ.
ಮಹಾಭಾರತದಲ್ಲಿನ ಪಾಂಡುವಂಶದ ರಾಜರುಗಳಾದ ಪರೀಕ್ಷಿತ್, ಜನಮೇಜಯ, ಶತಾನೀಕ ಮತ್ತು ಅಶ್ವಮೇಧದತ್ತ ರಾಜರುಗಳು ಸುಮಾರು 225 ವರ್ಷ ರಾಜ್ಯಭಾರ ಮಾಡಿದರು. ಅಶ್ವಮೇಧದತ್ತನ ಮಗ ಅಸೀಮಕೃಷ್ಣನು ಒಂದು ದೀರ್ಘ ಯಾಗವನ್ನು ಮಾಡಿದನು. ಇವನ ಕಾಲದಲ್ಲೂ ಋಷಿಗಳು ಇದ್ದರು. ಧರ್ಮರಾಜನು ಭೂಮಿಯನ್ನು ಬಿಟ್ಟನಂತರ ಕಲಿಯುಗ ಪ್ರಾರಂಭವಾಯಿತೆಂದು ಪರಿಗಣಿಸಿದರೆ ಅದರಿಂದಾಚೆಗೆ 400 ವರ್ಷಗಳು ಋಷಿಗಳಿದ್ದರೆನ್ನಬಹುದು.
ಋಗ್ವೇದದಲ್ಲಿ ಸಾಧಾರಣವಾಗಿ ಒಂದು ಸೂಕ್ತದಲ್ಲಿರುವ ಮಂತ್ರಗಳಿಗೆಲ್ಲಾ ಒಬ್ಬನೇ ಋಷಿ. ಹಾಗೇ ಒಂದು ಸೂಕ್ತದಲ್ಲಿರುವ ಅನೇಕ ಮಂತ್ರಗಳಿಗೆ ಬೇರೆ ಬೇರೆ ಋಷಿಗಳೂ ಇರುವುದುಂಟು. ಋಗ್ವೇದದಲ್ಲಿ ಹೀಗಿರುವುದರಿಂದ ವೇದಮಂತ್ರಗಳನ್ನು 3 ವಿಧವಾಗಿ ವಿಂಗಡಿಸಲಾಗಿದೆ. ಒಬ್ಬ ಋಷಿಯಿಂದ ದೃಷ್ಟವಾದ ಸೂಕ್ತಗಳನ್ನೆಲ್ಲ ಒಂದೆಡೆ ಸೇರಿಸಿ ನಂತರ ಇನ್ನೊಬ್ಬ ಋಷಿಯಿಂದ ದೃಷ್ಟವಾದ ಮಂತ್ರಗಳನ್ನು ಸೇರಿಸಬಹುದು. ಇಂತಹ ಮಂತ್ರಗಳ ಗುಂಪಿಗೆ ಒಂದು ಮಂಡಲವೆನ್ನುವರು. ಋಗ್ವೇದದಲ್ಲಿ 10 ಇಂತಹ ಮಂಡಲಗಳಿವೆ. ಋಷಿಗಳ ಕ್ರಮವನ್ನನುಸರಿಸು ಜೋಡಿಸಿರುವ ಸೂಕ್ತಗಳ ಗುಂಪುಗಳನ್ನು ಅಥವಾ ಮಂಡಲಗಳನ್ನು ಒಟ್ಟುಗೂಡಿಸಿರುವ ಕ್ರಮವೇ ಈಗಿರುವ ಋಗ್ವೇದ ಸಂಹಿತೆ.
ನಿರೀಕ್ಷಿಸಿ - ಮುಂದಿನ ಲೇಖನ - ಋಗ್ವೇದದ ದೇವತೆಗಳು
ಮೂಲ : ಋಗ್ವೇದ ಸಂಹಿತ - ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್

No comments:
Post a Comment